ಬಾಲ್ಯ ಪ್ರೇಮ
(12 ಪ್ರಾಯದ ಹುಡುಗನ ಬಾಲಿಶ ಪ್ರೇಮ ಕಥೆ- ಕವಿ ಎಚ್.ಕ್ಯಾರಿ)
ಹುಡುಗಿಯರೊಳೆಲ್ಲರೊಳು ಅವಳು ಬಹು ಚದುರೆ,
     ಹುಡುಕಿದರು ಸಿಗಲಾರಳಂಥ ಚಲುವೆ;
ಅವಳೆನ್ನ ಹೃದಯಕ್ಕೆ ಮೆಚ್ಚಿ ನೊಡತಿ,
     ನಾನಿರುವ ಬೀದಿಯೊಳಗವಳ ವಸತಿ
ರತುನದಂಥವ ಳವಳು ಸಿಹಿ ಮುದ್ದು ಹುಡುಗಿ,
    ಹುಡುಕಿದರು ಸಿಗಲಾರ ಳವಳ ಸರಿ ಜಗದಿ;
ಅವಳೆನ್ನ   ಹೃದಯಕ್ಕೆ  ಮೆ ಚ್ಚಿ ನೊ ಡ ತಿ,
    ನಾನಿರುವ   ಬೀದಿಯೊಳಗವಳ  ವಸತಿ. || 1 ||

ಬುಟ್ಟಿಗಳ ನೇಯುವನು ಅವಳ ತಂದೆ
    ಮತ್ತದನು ಕೂಗುವನು ಬೀದಿ ಬೀದಿಯಿಂದೆ;
ತಾಯಿ ಮಾರುವಳು ಸಿಹಿಯ ತಿನಸುಗಳನು;
   ಆಸೆ ಮೂಡುವ ತೆರದಿ ಕೊಳ್ಳಲವುಗಳನು;
ಆದರವರಲ್ಲದಿನ್ನಾವ ಜೋಡಿ, ಪಡೆಯಲಾರರು
    ಇವಳ  ಸರಿ-ಸಮ  ಸಿಹಿ-ಮುದ್ದು ಕುವರಿ.
ಅವಳೆನ್ನ ಹೃದಯಕ್ಕೆ ಮೆಚ್ಚಿ ನೊಡತಿ
   ನಾನಿರುವ  ಬೀದಿಯೊಳಗವಳ ವಸತಿ. || 2 ||

ನಾ ಬಿಡುವೆ ಕೆಲಸವನು  ಅವಳು ಬಳಿ ಇರಲು,
        ಅವಳಲ್ಲಿ ಎನಗಿರುವ ಪ್ರೀತಿ ಯಷ್ಟೊಂದು;
ಬರುವನೆನ್ನೊಡೆಯ ಶುದ್ಧ ತಿಗುಳನಂತೆ,
        ಹೊಡೆಯುವನೆನಗೆ ದನವ ಬಡಿಯುವಂತೆ-
ಹೊಡೆದುಕೊಳಲವನು ಅವನ ಕೈಲಾಗುವಷ್ಟು ,
        ಆಕೆ ಯೊಬ್ಬಳಿಗಾಗಿ ತಾಳಿಕೊಳುವೆ ನಷ್ಟು.
ಅವಳೆನ್ನ ಹೃದಯಕ್ಕೆ ಮೆಚ್ಚಿನೊಡತಿ,
        ನಾನಿರುವ ಬೀದಿಯೊಳಗವಳವಸತಿ.  || 3 || 

ಏಳು ದಿನಗಳು ತಾನೆ ಒಂದು ವಾರದೊಳಗೆ,
        ಹೇಳುವೆನು ಸತ್ಯವನೆ ಗುಟ್ಟೇನು ನಿಮ್ಮೊಳೆನಗೆ-
ಇರುವುದೊಂದೇ ದಿನದಿ ಪ್ರೀತಿ ಅವುಗಳಲ್ಲೆನಗೆ,
       ಅದು ಬಹುದು ಶನಿ-ಸೋಮವಾರಗಳ ನಡುವೆ;
ಅಂದು ನಾ ಸೊಗಸಿನಲಿ ತೋಟಗಳ ನಡುವೆ,
       ಆಕೆ ಯೊಡಗೂಡಿ ಬಲು ಮೋಜಿನಲಿ ನೆಡೆವೆ.
ಅವಳೆನ್ನ ಹೃದಯಕ್ಕೆ ಮ ಚ್ಚಿನೊಡತಿ,
       ನಾನಿರುವ  ಬೀದಿ ಯೊಳಗವಳ ವಸತಿ.  || 4 ||

ಕರೆದೊಯ್ವ  ಎನ್ನೊಡೆಯ ನೆನ್ನ ಗುಡಿಯ ಬಳಿಗೆ,
       ಮತ್ತೆನಗೆ ಸಿಕ್ಕೀತು ತೆಗಳಿಕೆಯೆ ಕಡೆಗೆ,
ಕಾರಣವು,  ಜಾರುವೆನು ನಾನವನನುಳಿದು,
        ಆರತಿಯು ನೆಡೆದಿರಲು,  ಚಾವಡಿಯನಿಳಿದು;
ಸಂಭ್ರಮದಿ ನಡೆದಿರಲು ಪೂಜೆ  ಗುಡಿಯಲ್ಲಿ,
         ನುಸುಳಿ ನಾ ನೆಡೆದಿರುವೆನವಳು ಇರುವಲ್ಲಿ.
ಅವಳೆನ್ನ ಹೃದಯಕ್ಕೆ ಮೆಚ್ಚಿ ನೊಡತಿ ,
         ನಾನಿರುವ ಬೀದಿಯೊಳಗವಳ  ವಸತಿ.  || 5 ||

ಸುಗ್ಗಿ  ಬರುವುದು ಸಂತಸವ ತರಲು ಮನಕೆ,
        ಅಂದು  ನಾ ದುಡಿದ ಹಣವೆಲ್ಲದರ ಎಣಿಕೆ,
ಕೂಡಿಡುವೆನದನೆಲ್ಲ ಪೆಟ್ಟಿಗೆಯ ಒಳಗೆ,
         ಕೊಂಡೊಯ್ವೆ ನೆಲ್ಲವನು ನನ್ನ ರಗಿಣಿಯ ಬಳಿಗೆ;
ಹತ್ತು ಸಾವಿರವಿರಲಿ  ನಾದುಡಿದ ಹೊನ್ನು,
         ಹೃದಯದರಸಿಗೆ ಕೊಡುವೆ ನದನೆಲ್ಲವನ್ನು;
ಅವಳೆನ್ನ  ಹೃದಯಕ್ಕೆ  ಮೆಚ್ಚಿ ನೊಡತಿ ,
       ನಾನಿರುವ ಬೀದಿಯಳಗವಳ ವಸತಿ.  || 6 ||

ಎನ್ರ್ನೆಡೆಯನೂ ನೆರೆಯವರು ಎಮ್ಮ ನೋಡಿ,
        ಮಾಡುವರು ಹಾಸ್ಯವನೆಮಗೆ ಕೈಯ ತೋರಿ
 ಆದರೇ ನೆನಗೆ , ಮತ್ತೆ   ನಾನನವಳಿಗಾಗಿ
        ಸಂತಸದಿ ಇದ್ದೇನು ಅವಳ ದಾಸನಾಗಿ;
ಕಳೆದರಿನ್ನೇಳು ವರುಷ (ಅಯ್ಯೋ) ಬಹಳ ಸಮಯ,
       ಓ! ಆದರೇನಂದವಳು ಎನ್ನ ಕುಸುಮ,
ಓ!  ಅಂದು ನಮಗಿಬ್ಬರಿಗು ಮದುವೆ-ಯೊಂದೆ ಶಯ್ಯೆ ,
       ಆದರೀ ಊರಿನೊಳಗಲ್ಲ  ಆ ಸುಖದ  ಶಯ್ಯೆ !  || 7 ||

(18ನೇ ಶತಮಾನದ ಕವಿ ಹೆಚ್..ಕ್ಯಾರಿ ಯ ‘ಸ್ಯಾಲಿ ಇನ್ ಅವರ್ 
(ಯ್ಯಾಲಿ)ವ್ಯಾಲಿ” ಕವನದ ಭಾವಾನುವಾದ (ಅನಾಮಿಕ- ಕಾಪಿರೈಟ್ ಮುಕ್ತ)
ಇಂಗ್ಲಿಷ್ ಮೂಲ

  SALLY IN OUR ALLEY
Of all the girls that are so smart
      There’s none like pretty Sally;
She is the darling of my heart,
      And she lives in our alley.
There is no lady in the land 
      Is half  so sweet as Sally;
She is the darling of my heart,
  And she lives in our alley.   (  1

Her father he makes cabbage-nets 
         And through the streets does cry ‘em;
Her mother she sells laces long 
      To such as please to buy them:
But sure such folks could ne’er beget
      So sweet a girl as sally!
She is the darling of my heart,
     And she lives in our alley    2

When she is by,  I leave my work,
   I love her so sincerely; 
My master comes like any ‘Turk, 
   And bangs me most severely –
But let him bang his bellyful,
   I‘ll bear it all for Sally. 
She is the darling of my heart 
  And she lives in our alley.   3

Of all the days that ‘s in a week
  I dearly love but one day –
And that is the day that comes betwixt
  A Saturday and Monday;   
For then I ‘m drest all in my best 
   To walk abroad with Sally;
She is the darling of my heart 
     And she lives in our alley.  4

My master carries me to church, 
    And often am I blamed 
Because I leave him in the lurch 
   As soon as text is named; 
I leave the church in sermon-time
  And slink away tosally; 
She is the darling of my heart 
   And she lives in our alley.   5

When Christmas comes again
      O then I shall have money;
I will hoard it up, and box it all,
      I‘ll give to my honey;
I would it were ten thousand pound, 
    I would give it allto Sally;
She is the darling of my heart 
   And she lives in our alley .    6

My master and the neighbours all
   Make game of me and Sally,
And, but for her, I‘d better be 
    A slave and row a galley;
But when my sevenlong years are out 
   O then I ‘ll marry Sally,- 
O then we‘ll wed and then we’ll bed,
     But not in our alley!           7
H. Carry,( Carey, Henry, English poet)(18th C. Poet )(Taken from the book ‘Golden Treasury’Poem cxxI (121),page-124, 1874 edition-Edited by F.T. Palgrave. https://en.wikisource.org/wiki/Sally_in_Our_Alley_(1729)
H. Carry,( Carey, Henry, English poet)(18th C. Poet )   
(Taken from the book ‘Golden Treasury’
Poem cxxI (121),  page-124, 1874 edition
Edited by F.T. Palgrave. 
Text is available under the Creative Commons Attribution-Share Alike License:
ಮೂಲ ಕವನಕ್ಕೆ ಕೊಂಡಿ:Sally in Our Alley

ನೋಡಿ
ಇಂಗ್ಲಿಷ್ ಸಾಹಿತ್ಯ
ನಾಸದೀಯ ಸೂಕ್ತ
ಒಂದು ಬಯಕೆ
ಪ್ರಿಯತಮೆಗೆ
 ಪ್ರಿಯತಮೆ ಆಂಥಿಯಾಳಿಗೆ
 ನ್ಯೂಮನನ `ಲೀಡ್, ಕೈಂಡ್ಲಿ ಲೈಟ್: ಕರುಣಾಳು ಬಾ ಬೆಳಕೆ
 Sally in Our Alley: ಬಾಲ್ಯ ಪ್ರೇಮ - (12 ಪ್ರಾಯದ ಬಾಲಿಶ ಪ್ರೇಮ)
 THE TRUE BEAUTY;-ಥಾಮಸ್ ಕೇರ್ವ್(1594-1640)- ನೈಜ ಸೌಂದರ್ಯ

ಪರಿವಿಡಿ

ಉಲ್ಲೇಖ